NEW

2023-24ನೇ ಸಾಲಿನ ಸ್ನಾತಕೋತ್ತರ I & IIIನೇ ಸೆಮಿಸ್ಟರ್ ನ (Regular) ವಿದ್ಯಾರ್ಥಿಗಳ ಪರೀಕ್ಷಾ ಅಧಿಸೂಚನೆ(Exam Notification) ೨೦೨೩-೨೪ ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸ್ ಗಳ ಶೈಕ್ಷಣಿಕ ಪರೀಷ್ಕೃತ ವೇಳಾಪಟ್ಟಿ 2023-24 ನೇ ಸಾಲಿನ ಸ್ನಾತಕ I, III & Vನೇ ಸೆಮಿಸ್ಟರ್ ಗಳ ಪ್ರಶ್ನೆ ಪತ್ರಿಕೆ ಮಾದರಿ ಉತ್ತರಗಳು ತಯಾರಿಕೆ 2023-24ನೇ ಸಾಲಿನ ಸ್ನಾತಕೋತ್ತರ I ಮತ್ತು IIIನೇ ಸೆಮಿಸ್ಟರ್ ನ ರಿಪಿಟರ್ಸ್ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ಕೊನೆಯ ದಿನಾಂಕ 2023-24ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) I ಹಾಗೂ IIIನೇ ಸೆಮಿಸ್ಟರ್ ಗಳ ತರಗತಿಗಳು ಕೊನೆಗೊಳ್ಳುವ ದಿನಾಂಕ 2023-24ನೇ ಸಾಲಿನ ಸ್ನಾತಕ I, III ಮತ್ತು Vನೇ ಸೆಮಿಸ್ಟರ್ ನ ಮುಂದೂಡಿದ ಪರೀಕ್ಷೆಗಳ ದಿನಾಂಕಗಳು ದಿನಾಂಕ 21.04.2024 ರಂದು ನಡೆಯಲಿರುವ 2023-24ನೇ ಸಾಲಿನ ಎಲ್ಲಾ ಸ್ನಾತಕ(NEP) ಪರೀಕ್ಷೆಗಳ ಮುಂದೂಡಿಕೆ

Press releases

View by type

View by releasing authority

ಸ್ನಾತಕೋತ್ತರ ಪದವಿಗಳ ಫಲಿತಾಂಶಗಳು

ದ್ವಿತೀಯ ಸೆಮಿಸ್ಟರ್ ನ (MJMC, MLiSc) ಹಾಗೂ ನಾಲ್ಕನೇ ಸೆಮಿಸ್ಟರ್ ನ (History, Sociology, MJMC) ಫಲಿತಾಂಶಗಳನ್ನು ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ) ಇವರು ಪ್ರಕಟಿಸಿದರು.

ಸ್ವಾಮಿ ವಿವೇಕಾನಂದರ 162 ನೇ ಜಯಂತೋತ್ಸವ ಹಾಗೂ ರಾಷ್ಟ್ರೀಯ ಯುವ ಸಪ್ತಾಹ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹ – 2024 ಆಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ, ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಪ್ರೊ. ಪಿ ಭಾಸ್ಕರ್ ನೋಡಲ್ ಅಧಿಕಾರಿಗಳು, ಡಾ. ಜಿ ಎಸ್ ಬಿರಾದರ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಕಟ್ಟಡದ ನಿರ್ಮಾಣ ಕಾಮಗಾರಿ ಪರಿಶೀಲನೆ

ಪ್ರೊ. ಹರೀಶ್ ರಾಮಸ್ವಾಮಿ ಗೌರವಾನ್ವಿತ ಕುಲಪತಿಗಳು ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ರಾಯಚೂರು ವಿಶ್ವವಿದ್ಯಾಲಯ ಮುಖ್ಯ ಆವರಣದಲ್ಲಿ ನಡೆದಿರುವ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪರಿಶೀಲಿಸಿದರು.

ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಆರಂಭ

ವಿಶ್ವವಿದ್ಯಾಲಯದ ೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಪ್ರಕ್ರಿಯೆವು ದಿನಾಂಕ ೦೩.೦೧.೨೦೨೪ ರಿಂದ ಪ್ರಾರಂಭಗೊಳ್ಳಲಿದೆ ಎಂದು ಪ್ರೊ. ವಿಶ್ವನಾಥ್ ಎಂ. ಕುಲಸಚಿವರು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಅವರು ಘೋಷಿಸಿದರು.

ಅಥ್ಲೆಟಿಕ್ ಕ್ರೀಡಾಕೂಟ 2023-24

ಮೊಟ್ಟಮೊದಲ ಬಾರಿಗೆ ರಾಯಚೂರು ವಿಶ್ವವಿದ್ಯಾನಿಲಯದ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ೨೦೨೩-೨೪ ಆಯೋಜನೆ ಮಾಡಿದಕ್ಕಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಉದ್ಯೋಗ ಕೌಶಲ್ಯಗಳ ದೃಷ್ಟಿಕೋನ ಕಾರ್ಯಕ್ರಮ

ರಾಯಚೂರು ವಿಶ್ವವಿದ್ಯಾನಿಲಯದ ಕಾಲೇಜು ಉಪನ್ಯಾಸಕರಿಗೆ 07.12.2023 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿನಲ್ಲಿ ಉದ್ಯೋಗ ಕೌಶಲ್ಯಗಳ ದೃಷ್ಟಿಕೋನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು
ಮಾನ್ಯ ಕುಲಪತಿಗಳು ಪ್ರೊ.ಹರೀಶ್ ರಾಮಸ್ವಾಮಿ ಅವರು ಉದ್ಘಾಟಿಸಿದರು.

ಪ್ರಾಚಾರ್ಯರ ಸಭೆ

ವಿಶ್ವವಿದ್ಯಾಲಯದ ಆಡಳಿತಾತ್ಮಕ ಹಾಗು ಶೈಕ್ಷಣಿಕ ವಿಚಾರಗಳನ್ನು ಚರ್ಚಿಸಲು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿನಲ್ಲಿ ಆಯೋಜಿಸಿದ ಪ್ರಾಚಾರ್ಯರ ಸಭೆಯನ್ನು ಮಾನ್ಯ ಕುಲಪತಿಗಳು ಪ್ರೊ. ಹರೀಶ್ ರಾಮಸ್ವಾಮಿ ಇವರು ಉದ್ಘಾಟಿಸಿದರು.

ವಿಶ್ವಚೇತನ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತೋತ್ಸವ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ, ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಪ್ರೊ. ಪಿ ಭಾಸ್ಕರ್ ನೋಡಲ್ ಅಧಿಕಾರಿಗಳು, ಡಾ. ಜಿ ಎಸ್ ಬಿರಾದರ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಸ್ನಾತಕೋತ್ತರ ಪರೀಕ್ಷೆಗಳು

ಸ್ನಾತಕೋತ್ತರ II ಹಾಗೂ IVನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಮತ್ತು ಸಮಯೋಚಿತವಾಗಿ ನಡೆಸಲು ಎಲ್ಲಾ ಕಾಲೇಜುಗಳಿಗೆ ಪ್ರೊ.ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ ) ಆದೇಶಿಸಿರುತ್ತಾರೆ. ಮುಖ್ಯ ಆವರಣದ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೊಠಡಿಗೆ ಭೇಟಿ ನೀಡಿದ ಸಮಯ.