NEW

2025-26 ನೇ ಸಾಲಿನ ಸ್ನಾತಕೋತ್ತರ(PG) ಪ್ರಥಮ (REVISED/NEW/OLD-CBCS) ಹಾಗೂ ತೃತೀಯ (NEW/OLD-CBCS) ಸೆಮಿಸ್ಟರ್ ನ ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. 2026-27ನೇ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ ನ ರೆಗ್ಯುಲರ್/ರಿಪೀಟರ್ಸ್(SEP/NEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು. 2021-22, 2022-23 ಹಾಗೂ 2023-24 ನೇ ಸಾಲಿನ ಸ್ನಾತಕ(UG) ಹಾಗೂ ಸ್ನಾತಕೋತ್ತರ(PG) ಕೋರ್ಸ್ ಗಳಿಗೆ 2026-27 ನೇ ಸಾಲಿನಲ್ಲಿ ನಡೆಯಲಿರುವ ಪ್ರಥಮ ವಾರ್ಷಿಕ ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸುವ ಕುರಿತು. 2026-27ನೇ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ ನ ರೆಗ್ಯುಲರ್/ರಿಪೀಟರ್ಸ್(SEP/NEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ತಾಲೂಕ ಮಟ್ಟದ "ಯುವ ಸಂಸತ್ತು (Youth Parliament)" ಸಭೆಯಲ್ಲಿ ಭಾಗವಹಿಸುವ ಕುರಿತು. ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಕುರಿತು. 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ ನ ರೆಗ್ಯುಲರ್/ರಿಪೀಟರ್ಸ್(SEP/NEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು.

ವಾಲ್ಮೀಕಿ ವಿವಿಯಲ್ಲಿಅಂಬಿಗರ ಚೌಡಯ್ಯ ಜಯಂತಿ ಆಚರಣೆ: ಅಂಬಿಗರ ಚೌಡಯ್ಯರ ಕಾಯಕ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳೋಣ : ಪ್ರೊ.ಶಿವಾನಂದ ಕೆಳಗಿನಮನಿ

ದಿ. ೨೧ ಜನವರಿ ೨೦೨೬ : ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ಶರಣ ಪರಂಪರೆಯ ಅಂಬಿಗರ ಚೌಡಯ್ಯರ ಕಾಯಕತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಇಂತಹ ಮಹನೀಯರ ಜಯಂತಿ ಆಚರಣೆ ಶ್ಲಾಘನೀಯ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್., ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಗ್ರಂಥಪಾಲಕ ಡಾ.ಜಿ.ಎಸ್.ಬಿರಾದಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಕುಲಸಚಿವರಾದ ಡಾ.ಕೆ.ವೆಂಕಟೇಶ ಸ್ವಾಗತಿಸಿ ವಂದಿಸಿದರು.