NEW

2025-26 ನೇ ಸಾಲಿನ ಪಿಚ್.ಡಿ ಕೋರ್ಸ್ ವರ್ಕ್ ನ(Ph.D Course Work) ಪರೀಕ್ಷಾ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು. 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪ್ರಥಮ ಸೆಮಿಸ್ಟರ್ ಪ್ರವೇಶಾತಿಯ ಖಾಲಿ ಸೀಟುಗಳ ಕೌನ್ಸಿಲಿಂಗ್ ದಿನಾಂಕ ಬದಲಿಸಲಾಗಿರುವ ಕುರಿತು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಎಲ್ಲ ಅಧೀನ ಹಾಗೂ ಸಂಲಗ್ನ ಮಹಾವಿದ್ಯಾಲಯಗಳಲ್ಲಿ ಯುವ ರೆಡ್ ಕ್ರಾಸ್ ಘಟಕಗಳನ್ನು ಪ್ರಾರಂಭಿಸುವ ಕುರಿತು. Fee Structure Prescribed for Various PG Courses (First Year) offered in the Private Affiliated Colleges for the Academic Year 2026-27 Fee Structure Prescribed for Various PG Courses (First Year) offered in the Government Colleges for the Academic Year 2026-27 Fee Structure Prescribed for Various PG Courses (First Year) offered in the University Main Campus for the Academic Year 2026-27 CYBEROMEGA IT LLP ಸಂಸ್ಥೆಯ ವತಿಯಿಂದ ಸ್ನಾತಕ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ಯೆಗಾರಿಕೆ ಹಾಗು ಶೈಕ್ಷಣಿಕ ಕಾರ್ಯಚಟುವಟಿಕೆಗಳ ತರಬೇತಿ ಕುರಿತು

ವಿವಿಯ ಸಭಾಂಗಣದಲ್ಲಿ “ರಾಷ್ಟೀಯ ಮತದಾರರ ದಿನಾಚರಣೆ” ಅಂಗವಾಗಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಮತದಾನ ಬಹಳ ಅಮೂಲ್ಯವಾದುದು, ಅದನ್ನು ಬೇಕಾಬಿಟ್ಟಿಯಾಗಿ ಚಲಾಯಿಸಬಾರದು ತಪ್ಪು ಮತದಾನ ತಪ್ಪು ನಾಯಕನ ಆಯ್ಕೆಗೆ ಕಾರಣವಾಗುತ್ತದೆ ಎಂದು ವಿವಿಯ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಅಭಿಪ್ರಾಯಪಟ್ಟರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ರಾಷ್ಟೀಯ ಮತದಾರರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದರು.

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಮತದಾನವನ್ನು ಪಾವಿತ್ರ್ಯತೆಗೆ ಹೋಲಿಸುತ್ತಾರೆ. ಈ ಪವಿತ್ರ ಮತಗಳನ್ನು ಅರ್ಹರಿಗೆ ಚಲಾಯಿಸಿ ಚುನಾಯಿಸಬೇಕು. ಮಹಾನಗರಗಳ ಪ್ರಜ್ಞಾವಂತರು ಎನ್ನಿಸಿಕೊಂಡ ಬಹುತೇಕ ನಾಗರಿಕರು ಮತದಾನ ಮಾಡುತ್ತಿಲ್ಲ. ಅಲ್ಲಿ ಶೇ.೩೦ರಷ್ಟು ಮತದಾನವಾದ ವರದಿಗಳಿವೆ. ಮತದಾನ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಜೊತೆಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ ಎಂದರು.
ಕುಲಸಚಿವ (ಆಡಳಿತ) ಡಾ. ಎ.ಚನ್ನಪ್ಪ ಅವರು ಮಾತನಾಡಿ, ಮತದಾನದ ಕುರಿತು ಯುವಜನರಲ್ಲಿ ಪ್ರಜ್ಞೆ ಮೂಡಿಸಬೇಕು. ಹೊಸ ಮತದಾರರು ಮತ ಚಲಾಯಿಸುವಂತೆ ಪ್ರೇರೇಪಿಸಬೇಕು. ನಾವು ಒಬ್ಬರು ಮತ ಚಲಾಯಿಸದಿದ್ದರೆ ಏನೂ ಆಗುವದಿಲ್ಲವೆಂಬ ಉದಾಸೀನ ಬೇಡ. ಸಮರ್ಥರನ್ನು ಚುನಾಯಿಸಬೇಕು ಎಂದರೆ ಮತ ಚಲಾಯಿಸಲೇಬೇಕು. ಆಸೆ, ಆಮಿಷಗಳಿಗೆ ಬಲಿಯಾಗದೆ ಮತ ಹಾಕಿ. ಎಲ್ಲೆಡೆ ಮತದಾರರ ಸಾಕ್ಷರತಾ ಕ್ಲಬ್‌ಗಳು ಕಾರ್ಯನಿರ್ವಹಿಸುವಂತಾಗಬೇಕು ಎಂದರು.
ಉಪಕುಲಸಚಿವ ಡಾ.ಕೆ.ವೆಂಕಟೇಶ್ ಅವರು ಮಾತನಾಡಿ, ಪ್ರಜೆಗಳು ದೇಶದ ಪ್ರಾಣಧಾತು ಇದ್ದಂತೆ. ಅವರು ತಗೆದುಕೊಳ್ಳುವ ನಿರ್ಧಾರದ ಮೇಲೆ ಆ ದೇಶದ ಮೌಲ್ಯ ನಿರ್ಣಯವಾಗುತ್ತದೆ. ವಾಸ್ತವವಾಗಿ ಹಳ್ಳಿಗರು, ಅನಕ್ಷರಸ್ಥರು, ಆದಿವಾಸಿಗಳೇ ಹೆಚ್ಚು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆ ನೋಡಿದರೆ ನಗರವಾಸಿಗಳೇ ಹೆಚ್ಚು ಪಾಲ್ಗೊಳ್ಳುತ್ತಿಲ್ಲ. ಜೊತೆಗೆ ಹಣ, ಅಧಿಕಾರದ ಬಲದಿಂದ ಚುನಾವಣೆಗಳು ನಡೆಯುತ್ತಿವೆ. ಇದಕ್ಕೆ ತದ್ವಿರುದ್ಧವಾಗಿ ಶಾಂತವೇರಿ ಗೋಪಾಲಗೌಡರಂಥವರನ್ನು ಸ್ವತಃ ಜನರೇ ಮುಂದಾಗಿ ಗೆಲ್ಲಿಸಿದರು. ಸಜ್ಜನರನ್ನು ಚುನಾಯಿಸುವ ಶಕ್ತಿ ಇರುವುದು ಮತದಾನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ವೇದಿಕೆಯ ಮೇಲೆ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಡೀನ್‌ರಾದ ಪ್ರೊ.ಪಾರ್ವತಿ ಸಿ.ಎಸ್., ಪ್ರೊ. ಪಿ. ಭಾಸ್ಕರ್, ಡಾ. ಸುಯಮೀಂದ್ರ ಕುಲಕರ್ಣಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉಪನ್ಯಾಸಕ ಅನೀಲ ಅಪ್ರಾಳ್ ನಿರೂಪಿಸಿದರು.