NEW

Press releases

View by type

View by releasing authority

ರಾಜ್ಯಮಟ್ಟದ ಎನ್.ಎಸ್.ಎಸ್ ಯುವಜನೋತ್ಸವ-2023

ರಾಷ್ಟ್ರೀಯ ಸೇವಾ ಯೋಜನೆ ಕೋಶ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರಕಾರ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಮತ್ತು ರಾಯಚೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಜ್ಯಮಟ್ಟದ ಎನ್.ಎಸ್.ಎಸ್ ಯೋಜನೋತ್ಸವ-2023 ಕಾರ್ಯಕ್ರಮವನ್ನು ದಿನಾಂಕ 03.10.2023 ರಿಂದ 07.10.2023 ರವರೆಗೆ ಪ್ರೇಕ್ಷಾಗೃಹ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರುನಲ್ಲಿ ಆಯೋಜಿಸಲಾಗಿದೆ.

ರಾಯಚೂರು ವಿಶ್ವವಿದ್ಯಾಲಯಕ್ಕೆ ಡಾ.ಗುರುರಾಜ್ ಕರ್ಜಗಿ ಅವರ ಭೇಟಿ

ರಾಯಚೂರು ವಿಶ್ವವಿದ್ಯಾಲಯಕ್ಕೆ ಶಿಕ್ಷಣ ತಜ್ಞರು ಹಾಗೂ ಕ್ರಿಯೇಟಿವ್ ಅಕಾಡೆಮಿ ಆಫ್ ಎಜುಕೇಶನ್ ನಿರ್ದೇಶಕರು ಆದ ಡಾ.ಗುರುರಾಜ್ ಕರ್ಜಗಿ ಇವರು ದಿನಾಂಕ 10.10.2023 ಬೆಳಗ್ಗೆ 9.30 ಗಂಟೆಗೆ ಭೇಟಿ ನೀಡಿದ್ದರು.

“ಭಾರತದಲ್ಲಿ ಭಕ್ತಿ ಸಂಪ್ರದಾಯ”

ರಾಯಚೂರು ವಿಶ್ವವಿದ್ಯಾಲಯದಲ್ಲಿ “ಭಾರತದಲ್ಲಿ ಭಕ್ತಿ ಸಂಪ್ರದಾಯ” ಎಂಬ ಎರಡು ದಿನಗಳ ಕಾರ್ಯಗಾರವನ್ನು ಮಾನ್ಯ ಕುಲಪತಿಗಳು ಪ್ರೊ. ಹರೀಶ್ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.09.2023 ರಿಂದ 27.09.2023 ರ ವರೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 15.09.2023 ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಿ.ಎಡ್ ಪ್ರಥಮ ಹಾಗು ತೃತೀಯ ಸೆಮಿಸ್ಟರ್ ನ ಫಲಿತಾಂಶಗಳು ಪ್ರಕಟ

ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ಬಿ.ಎಡ್ ಪ್ರಥಮ ಹಾಗು ತೃತೀಯ ಸೆಮಿಸ್ಟರ್ ನ ಫಲಿತಾಂಶಗಳನ್ನು ಪ್ರಕಟಿಸಿದರು ಮತ್ತು ಬಿ.ಎಸ್ಸಿ, ಬಿಸಿಎ, ಬಿಬಿಎ, ಬಿಕಾಂ ದ್ವಿತೀಯ ಸೆಮಿಸ್ಟರ್ ನ ಫಲಿತಾಂಶಗಳನ್ನು ಪ್ರಕಟಿಸಲು ಸಹಾಯ ಮಾಡಿದ UUCMS ನ HEAD ಹಾಗು ತಾಂತ್ರಿಕ ಸಿಬ್ಬಂದಿ ಬೆಂಗಳೂರು ಇವರುಗಳಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.

ವಿಶೇಷ ಉಪನ್ಯಾಸ ಕಾರ್ಯಕ್ರಮ.

“ವಿದ್ವತ್ಪೂರ್ಣ ಬರವಣಿಗೆ ಮತ್ತು ಪ್ರಕಾಶನ : ಕಾರ್ಯ ತಂತ್ರಗಳ” ಕುರಿತು ಒಂದು ದಿನದ ವಿಶೇಷ ಉಪನ್ಯಾಸವನ್ನು ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಾನ್ಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.

ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ ಅಂಗವಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ದಿನಾಂಕ ೦೫.೦೯.೨೦೨೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು