ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ: ಪ್ರೊ.ಶಿವಾನಂದ ಕೆಳಗಿನಮನಿ




ದಿನಾಂಕ: ೦೩.೧೨.೨೦೨೫ ರಂದು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ೨೦೨೫-೨೬ ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ ಸಂಜೆ ವಿ.ಆರ್.ಇ.ಟಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕುಲಸಚಿವರಾದ ಡಾ.ಎ.ಚನ್ನಪ್ಪ, ಕುಲಸಚಿವರು (ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮ ಪ್ರಕಾಶ್, ಶ್ರೀಮತಿ ಸೀಮಾ ಭೈನ್ಸೆ (ಆಂದ್ರಪ್ರದೇಶದ ಅಂತರ್ ರಾಷ್ಟೀಯ ಮಾಸ್ಟರ್ ಅಥ್ಲೆಟ್ ಪಟು), ಶ್ರೀಮತಿ ಬಿಂದು ರಾಣಿ ಜಿ (ಬೆಂಗಳೂರಿನ ಅಂತರ್ ರಾಷ್ಟೀಯ ಅಥ್ಲೆಟ್ ಪಟು ಮತ್ತು ಏಶಿಯನ್ ಪದಕ ವಿಜೇತರು), ಉಪ ಕುಲಸಚಿವರಾದ ಡಾ.ಕೆ.ವೆಂಕಟೇಶ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಲತಾ.ಎಂ.ಎಸ್., ವಿ.ಆರ್.ಇ.ಟಿ ಸಂಸ್ಥೆಯ ಅಧ್ಯಕ್ಷರಾದ ಮಹಾದೇವಿ ಪಾಸೋಡಿ ಉಪಸ್ಥಿತರಿದ್ದರು.