ಅಂಬೇಡ್ಕರ್ ಸಹಾನುಭೂತಿಯ ಭಾರತ ನಿರ್ಮಾಣದ ಸಂಘಟಿತ ಹೋರಾಟದ ಸ್ಫೂರ್ತಿ: ಪ್ರೊ.ಶಿವಾನಂದ ಕೆಳಗಿನಮನಿ



ದಿನಾಂಕ: ೦೬/೧೨/೨೦೨೫ ರಂದು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ 70ನೇ ಮಹಾ ಪರಿನಿರ್ವಾಣ ದಿನದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು, ಸಂಜೆ ಕ್ಯಾಂಡಲ್ ದೀಪದಿಂದ ಅವರಿಗೆ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ವಿವಿಯ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ, ಕುಲಸಚಿವರಾದ ಡಾ.ಎ.ಚನ್ನಪ್ಪ, ಹಣಕಾಸು ಅಧಿಕಾರಿ ಶ್ರೀಮತಿ ಗಾಯಿತ್ರಿ, ಉಪಕುಲಸಚಿವರಾದ ಡಾ.ಕೆ.ವೆಂಕಟೇಶ, ಕುಲಸಚಿವರು (ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮ ಪ್ರಕಾಶ್, ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಪ್ರೊ.ಪಿ.ಭಾಸ್ಕರ್, ಡಾ.ಲತಾ.ಎಂ.ಎಸ್., ಡಾ.ಜಿ.ಎಸ್.ಬಿರಾದಾರ್ ಉಪಸ್ಥಿತರಿದ್ದರು.