ಸುಸ್ಥಿರ ಸಮಾಜ ನಿರ್ಮಾಣ ಪತ್ರಕರ್ತರ ಹೊಣೆ – ಬಸವರಾಜಸ್ವಾಮಿ


ದಿನಾಂಕ: ೧೦.೧೨.೨೦೨೫ ರಂದು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಿಂದ ಮೀಡಿಯಾ ಸರ್ಕಲ್ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸುದ್ದಿಮೂಲ ದಿನಪತ್ರಿಕೆಯ ಸಂಪಾದಕರಾದ ಬಸವರಾಜಸ್ವಾಮಿ ಅವರು ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಾಲ್ಮೀಕಿ ವಿವಿಯ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಅಧ್ಯಕ್ಷತೆ ವಹಿಸಿ ಸಾಹಿತ್ಯ ಹಾಗೂ ಮಾಧ್ಯಮ ವಿಷಯ ಕುರಿತು ಹಾಗೂ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ ಪತ್ರಿಕೋದ್ಯಮ ಮತ್ತು ಅಂಬೇಡ್ಕರ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಡಾ.ಎ.ಚನ್ನಪ್ಪ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಪ್ರೊ.ಪಿ.ಭಾಸ್ಕರ್, ಡಾ.ಲತಾ.ಎಂ.ಎಸ್., ಡಾ.ಜಿ.ಎಸ್.ಬಿರಾದಾರ್ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ.ಪ್ರಭಾ ಬಸವರಾಜ ಸ್ವಾಮಿ, ಡಾ.ಗೀತಮ್ಮ, ಡಾ.ತಿಪ್ಪಣ್ಣ ಗೊರವರ ಉಪಸ್ಥಿತರಿದ್ದರು.