NEW

೨೦೨೫-೨೬ ನೇ ಸಾಲಿನ ಸ್ನಾತಕ (UG) ದ್ವಿತೀಯ, ನಾಲ್ಕನೇಯ ಮತ್ತು ಆರನೇಯ ಸೆಮಿಸ್ಟರ್ ನ ರೆಗ್ಯುಲರ್/ ರಿಪೀಟರ್ಸ್ (NEP/SEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು ೨೦೨೪-೨೫ ನೇ ಸಾಲಿನ ಸ್ನಾತಕ (UG)(SEP/NEP) ದ್ವಿತೀಯ ಮತ್ತು ನಾಲ್ಕನೇಯ ಸೆಮಿಸ್ಟರ್ ನ ಬಿಎ/ಬಿಎಸ್ಸಿ / ಬಿಕಾಂ/ಬಿಸಿಎ /ಬಿಬಿಎ /ಬಿಎಸ್ ಡೆಬ್ಲ್ಯೂ ಕೋರ್ಸ್ ಗಳ ಮರುಮೌಲ್ಯಮಾಪನ ಅಧಿಸೂಚನೆ 2025-26 ನೇ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಹಾಗೂ ಐದನೇಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ಸಂಭಾವನೆಯನ್ನು ಪಾವತಿಸಲು ಅವರ ಬ್ಯಾಂಕ್ ಖಾತೆಯ ವಿವರವನ್ನು ಒದಗಿಸುವ ಕುರಿತು. 2025-26ನೇ ಸಾಲಿನ ಸ್ನಾತಕೋತ್ತರ(PG) ದ್ವಿತೀಯ ಸೆಮಿಸ್ಟರ್ ನ OPEN ELECTIVE(OE) ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು. 2025-26ನೇ ಸಾಲಿನ ಬಿ.ಇಡಿ. ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸರ್ಕಾರಿ ಕೋಟಾದಡಿ ದಾಖಲಾಗದೆ ಉಳಿಕೆಯಾಗಿರುವ ಸೀಟುಗಳ ಮಾಹಿತಿ ಕುರಿತು. ೨೦೨೪-೨೫ ನೇ ಸಾಲಿನ ಸ್ನಾತಕೋತ್ತರ(PG) ನಾಲ್ಕನೇ ಸೆಮಿಸ್ಟರ್ ನ(CBCS/NEWCBCS) ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು. Registration of II Semester Open Elective Subject 2026

ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅಪಾರ : ಪ್ರೊ.ಎಂ.ವೆಂಕಟೇಶ್ವರುಲು

ರಾಯಚೂರು,ಮಾ.೧೦- ಪ್ರಾಚೀನ ಕಾಲದಿಂದಲೂ ನಮ್ಮ ದೇಶ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಕೊಡುಗೆಗಳನ್ನು ಕೊಟ್ಟಿದೆ. ಖಗೋಳದಿಂದ ಹಿಡಿದು ಜ್ಯೋತಿಷ್ಯ ಶಾಸ್ತ್ರದವರೆಗೂ ಅನೇಕ ರೀತಿಯಿಂದ ವಿಜ್ಞಾನ ಆವಿಷ್ಕಾರಗಳಾಗಿವೆ. ವಿಜ್ಞಾನ ಹೇಗೆ ಬೆಳೆಯಿತು ಎಂದರೆ ಗ್ರಹಿಕೆಯಿಂದ ಮಾತ್ರ ಬೆಳೆಯಿತು ಎಂದು ತುಮಕೂರಿನ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ. ವೆಂಕಟೇಶ್ವರುಲು ಉದ್ಘಾಟಕ ನುಡಿಗಳನ್ನಾಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗಗಳ ವತಿಯಿಂದ ಮಂಗಳವಾರದAದು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಅಂಗವಾಗಿ ವಿಶೇಷ ಉಪನ್ಯಾಸಮಾಲೆ ಕಾರ್ಯಕ್ರಮವನ್ನು ಡಾ.ಸಿ.ವಿ.ರಾಮನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಒಂದು ಆಲೋಚನೆಯ ಸಾಮರ್ಥ್ಯವನ್ನು ಒಳಗೊಂಡಿದೆ. ಡಾ.ಸಿ.ವಿ.ರಾಮನ್‌ರ ಪ್ರಾಮಾಣಿಕತೆ, ಶಿಸ್ತು, ಶ್ರಮ ಇಂದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಲಿಯಬೇಕು. ವಿಕ್ರಂ ಸಾರಾಬಾಯಿ, ಎಂ.ಎಸ್.ಸ್ವಾಮಿನಾಥನ್ ಇವರೆಲ್ಲರೂ ಪ್ರಸಿದ್ಧ ವಿಜ್ಞಾನಿಗಳು. ಯುವಕರು ಉತ್ತಮ ಆಲೋಚನೆಯಿಂದ ಮಾತ್ರ ಮುಂದೆಬರಲು ಸಾಧ್ಯ. ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯ, ಆಯಾ ವಿಷಯ ಕಲಿಕಾ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅವರ ಆಸಕ್ತ ಕ್ಷೇತ್ರದಲ್ಲಿ ಮುಂದುವರೆಯುವಂತೆ ಮಾರ್ಗದರ್ಶಿಸಬೇಕು. ವಿಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುವವರಿಗೆ ಹೊಸತನ್ನು ಆವಿಷ್ಕರಿಸುವ ಕಲಿಯುವ ಕೂತುಹಲತೆ ಬಹಳ ಮುಖ್ಯ. ಸಂಶೋಧನೆಯಲ್ಲಿ ನೈತಿಕತೆ ಇರಬೇಕು. ವಿದ್ಯಾರ್ಥಿಗಳಲ್ಲಿ ಗುರಿ, ಸಮಸ್ಯೆ ಬಗೆಹರಿಸುವ ಛಲ ಇರಬೇಕು. ಸೋಲಾರ್ ಎನರ್ಜಿ, ಸಿಎನ್‌ಜಿ, ಎಲೆಕ್ಟ್ರಿಕ್ ವಾಹನಗಳು ಹೀಗೆ ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡಿವೆೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ಸುಮಾರು ೧೮-೧೯ನೇ ಶತಮಾನದಿಂದಲೂ ವಿಜ್ಞಾನದಲ್ಲಿ ಆವಿಷ್ಕಾರಗಳಾಗುತ್ತಾ ಬಂದಿವೆ. ಜಗತ್ತಿನ ಎಲ್ಲಾ ದೇಶಗಳು ಸಾಂಪ್ರದಾಯಿಕ ದೃಷ್ಟಿಕೋನವನ್ನು ಹೊಂದಿದ್ದು, ಡಾರ್ವಿನ್ ವಿಕಾಸವಾದ, ನ್ಯೂಟನ್‌ನ ಗುರುತ್ವಾಕರ್ಷಣೆ, ಐನ್ಸ್ಟೀನ್ ನ ತತ್ವವಿಚಾರಗಳು ಅದೇ ರೀತಿಯಾಗಿ ಸಮಾಜ ವಿಜ್ಞಾನಗಳಾದ ಅರ್ಥಶಾಸ್ತ, ಸಮಾಜಶಾಸ್ತ, ಮನಶಾಸ್ತಿಯ ಇವೆಲ್ಲವೂ ವಿಜ್ಞಾನದ ಆವಿಷ್ಕಾರಗಳಾಗಿವೆ. ನಮ್ಮ ದೇಶ ಅನೇಕ ವಿಜ್ಞಾನಿಗಳನ್ನು ಕೊಟ್ಟಿದ್ದು ಬಹು ದೊಡ್ಡ ಕೊಡುಗೆಯಾಗಿದೆ. ಸಿ.ವಿ.ರಾಮನ್ ಮೊಟ್ಟ ಮೊದಲ ಬಾರಿಗೆ ನೋಬೆಲ್ ಪಾರಿತೋಷಕ ಪಶಸ್ತಿ ಪಡೆದ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿದ್ದು, ಅನೇಕ ವಿಜ್ಞಾನಿಗಳು ಅವರ ಪ್ರೇರಣೆಗೆ ಒಳಗಾದವರು ಎಂದು ತಿಳಿಸಿದರು.
ವಿಜ್ಞಾನ ಆವಿಷ್ಕಾರಗಳ ಜೊತೆಗೆ ಜಾಗತೀಕ ಮಟ್ಟದಲ್ಲಿ ವಿಜ್ಞಾನ ಸಾಕಷ್ಟು ಉತ್ತಮ ಬೆಳವಣಿಗೆಯನ್ನು ಕಂಡಿದೆ. ೬೦-೭೦ರ ದಶಕದಲ್ಲಿ ಆಹಾರದ ಕೊರತೆ, ವರ್ಷಕ್ಕೆ ಒಂದೇ ಬೆಳೆ, ನೀರಾವರಿ ಕೊರತೆ, ಬರಗಾಲದ ಭೀಕರತೆ ಅನುಭವಿಸಿದ್ದೇವೆ ಆದರೆ ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಆವಿಷ್ಕಾರದಿಂದ ಸಾಕಷ್ಟು ಬದಲಾವಣೆ ಕಂಡಿದ್ದೇವೆ. ಜಾಗತಿಕ ಮಟ್ಟದಿಂದ ವಿಜ್ಞಾನ ಆವಿಷ್ಕಾರ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಇಡೀ ಜಗತ್ತು ಅಂತರ್ಜಾಲದಿಂದ ಅಂಗೈಯಲ್ಲಿದೆ. ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಅನೇಕ ರೀತಿಯ ಯೋಜನೆಗಳನ್ನು ಹಾಕಿ ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ಸಂಶೋಧನೆಗಳ ಮೂಲಕ ಬೆಳೆಸುವಲ್ಲಿ ಮತ್ತು ವಿಶ್ವವಿದ್ಯಾಲಯವನ್ನು ಅಭಿವೃದ್ಧಿಗೊಳಿಸುತ್ತಾ ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡುವ ಸದುದ್ದೇಶ ಹೊಂದಿರುವುದಾಗಿ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ ವಿಭಾಗದ ಪ್ರೊ.ಕೆ.ಎಸ್.ಲೋಕೇಶ್ ಅವರು ರಾಮನ್ ಸ್ಪೆಕ್ಟೊçÃಸ್ಕೋಪಿ ವಿಷಯ ಕುರಿತು, ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವಿಜಯಕುಮಾರ ಹೆಚ್. ದೊಡ್ಡಮನಿ ಅವರು ಆಸ್ಟೊçÃಫಿಸಿಕ್ಸ್ ಕುರಿತು, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಸುರೇಶ ಎಂ. ಅವರು ಆರ್ಟಿಫಿಶಿಯಲ್ ಇಂಟಲಿಜನ್ಸ್ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕುಲಸಚಿವರು (ಮೌಲ್ಯಮಾಪನ) ಪ್ರೊ.ಜ್ಯೋತಿ ಧಮ್ಮ ಪ್ರಕಾಶ್, ರಾಜ್ಯಶಾಸ್ತ ವಿಭಾಗದ ಮುಖ್ಯಸ್ಥರಾದ ಡಾ.ಕೆ.ವೆಂಕಟೇಶ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎಸ್.ಬಿರಾದಾರ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರು ಹಾಗೂ ಡೀನರಾದ ಪ್ರೊ.ಪಿ.ಭಾಸ್ಕರ್ ಅವರು, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಡಾ.ಸಿ.ವಿ.ರಾಮನ್ ಅವರ ಕೊಡುಗೆ ವಿವರಿಸುತ್ತಾ ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಣ ನಿಕಾಯದ ಡೀನರಾದ ಪ್ರೊ.ಪಾರ್ವತಿ ಸಿ.ಎಸ್. ಸ್ವಾಗತಿಸಿದರು, ಗಣಿತ ವಿಭಾಗದ ವಿದ್ಯಾರ್ಥಿನಿ ರೂಪಶ್ರೀ ಪ್ರಾರ್ಥಿಸಿದರು, ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾ ವಿಧಿಯನ್ನು ಭೌತಶಾಸ್ತ ವಿಭಾಗದ ಉಪನ್ಯಾಸಕ ಡಾ.ರಾಮಣ್ಣ ಬೋಧಿಸಿದರು.
ಅತಿಥಿ ಉಪನ್ಯಾಸಕರಾದ ಅರ್ಷಿಯಾ ತಬಸ್ಸುಮ್, ಸುಶ್ಮೀತಾ ನಿರೂಪಿಸಿದರು, ಸ್ವಾತಿ.ಕೆ, ದಿವ್ಯಾ ಡೋರಕಾಸ್, ಡಾ.ಇಲಿಯಾಸ್, ನೇಹಾ ಗಸ್ತಿ, ಅತಿಥಿ ಪರಿಚಯ ಮಾಡಿದರು, ಕಲಾನಿಕಾಯದ ಡೀನರಾದ ಡಾ.ಲತಾ.ಎಂ.ಎಸ್ ವರದಿ ವಾಚಿಸಿ ವಂದಿಸಿದರು. ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

೨೦೨೫-೨೬ ನೇ ಸಾಲಿನ ಸ್ನಾತಕ (UG) ದ್ವಿತೀಯ, ನಾಲ್ಕನೇಯ ಮತ್ತು ಆರನೇಯ ಸೆಮಿಸ್ಟರ್ ನ ರೆಗ್ಯುಲರ್/ ರಿಪೀಟರ್ಸ್ (NEP/SEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು