
ದಿನಾಂಕ: 10ನೇ ಜುಲೈ 2025 ರಂದು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟ್ ಸಭಾಂಗಣದಲ್ಲಿ ಶರಣ ಹಡಪದ ಅಪ್ಪಣ್ಣ ಅವರ 891ನೇ ಜಯಂತಿಯನ್ನು ಆಚರಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ, ಕುಲಸಚಿವರು ಮೌಲ್ಯಮಾಪನ ಡಾ. ಜ್ಯೋತಿ ದಮ್ಮ ಪ್ರಕಾಶ, ಉಪಕುಲಸಚಿವರಾದ ಡಾ. ಕೆ. ವೆಂಕಟೇಶ್, ಡೀನರುಗಳಾದ ಪ್ರೊ. ಪಾರ್ವತಿ ಸಿ. ಎಸ್., ಪ್ರೊ. ಪಿ. ಭಾಸ್ಕರ್, ಸಹ ಪ್ರಾಧ್ಯಾಪಕರಾದ ಡಾ. ಸುಯಮಿಂದ್ರ ಕುಲಕರ್ಣಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಜಿ. ಎಸ್. ಬಿರಾದಾರ ಉಪಸ್ಥಿತರಿದ್ದರು.