ಕನ್ನಡ ಸಾಹಿತ್ಯ ಸಂಘದ ೨೦೨೫-೨೬ ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ


ದಿನಾಂಕ: ೦೩.೧೨.೨೦೨೫ ರಂದು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಕನ್ನಡ ಸಾಹಿತ್ಯ ಸಂಘದ ೨೦೨೫-೨೬ ನೇ ಸಾಲಿನ ಕಾರ್ಯಚÀಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ವೆಂಕಟಗಿರಿ ದಳವಾಯಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ನಿರ್ದೇಶಕರಾದ ಡಾ.ಅಮರೇಶ ಯತಗಲ್, ಉಪ ಕುಲಸಚಿವರಾದ ಡಾ.ಕೆ.ವೆಂಕಟೇಶ್, ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಡಾ.ಲತಾ.ಎಂ.ಎಸ್. ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ.ಶಿವರಾಜ ಯತಗಲ್, ಡಾ.ಶಿವಲೀಲಾ ಬಸನಗೌಡ, ಡಾ.ಶರಣಪ್ಪ ಚಲವಾದಿ, ಡಾ.ರಾಜೇಶ್ವರಿ, ಡಾ.ಗೀತಾಂಜಲಿ ಉಪಸ್ಥಿತರಿದ್ದರು.