ದೈಹಿಕ ಕ್ಷಮತೆ ಮತ್ತು ಕ್ರೀಯಾಶೀಲ ಬದುಕಿಗೆ ಕ್ರೀಡೆ ಮುಖ್ಯ : ಡಾ.ಜ್ಯೋತಿ ಧಮ್ಮ ಪ್ರಕಾಶ್



ದಿನಾಂಕ: ೦೫/೧೨/೨೦೨೫ ರಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ೨೦೨೫-೨೬ ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ವಿ.ಆರ್.ಇ.ಟಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಸಚಿವರು (ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮ ಪ್ರಕಾಶ್, ವಿ.ಆರ್.ಇ.ಟಿ ಸಂಸ್ಥೆಯ ಅಧ್ಯಕ್ಷರಾದ ಮಹಾದೇವಿ ಪಾಸೋಡಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಲತಾ.ಎಂ.ಎಸ್., ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ.ನಾಗರತ್ನ ಎಮ್.ನಾಯ್ಕ, ಕಾನೂನು ಸಲಹೆಗಾರರು ಮತ್ತು ವಕೀಲರಾದ ವಿಜಯಲಕ್ಷ್ಮಿ ಪಾಸೋಡಿ, ಕೃಷಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಡಾ.ರಾಜಣ್ಣ ಉಪಸ್ಥಿತರಿದ್ದರು.
ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಹಿಣಿ ಪ್ರಶಸ್ತಿಯನ್ನು ಪುರುಷ ವಿಭಾಗದಲ್ಲಿ ಮಾನ್ವಿಯ ಜಿಎಫ್‌ಜಿಸಿ ಪಡೆದರೆ, ಮಹಿಳಾ ವಿಭಾಗದಲ್ಲಿ ಹಾಗೂ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ಒಟ್ಟುಗೂಡಿ ಸಮಗ್ರ ವೀರಾಗ್ರಹಿಣಿ ಪ್ರಶಸ್ತಿಯನ್ನು ರಾಯಚೂರಿನ ವಿಆರ್‌ಇಟಿ ಕಾಲೇಜು ಪಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.