ವಿಶ್ವವಿದ್ಯಾಲಯದ ಆಡಳಿತಾತ್ಮಕ ಹಾಗು ಶೈಕ್ಷಣಿಕ ವಿಚಾರಗಳನ್ನು ಚರ್ಚಿಸಲು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿನಲ್ಲಿ ಆಯೋಜಿಸಿದ ಪ್ರಾಚಾರ್ಯರ ಸಭೆಯನ್ನು ಮಾನ್ಯ ಕುಲಪತಿಗಳು ಪ್ರೊ. ಹರೀಶ್ ರಾಮಸ್ವಾಮಿ ಉದ್ಘಾಟಿಸಿದರು. ಸಭೆಯಲ್ಲಿ ಪ್ರೊ.ವಿಶ್ವನಾಥ್ ಎಂ. ಕುಲಸಚಿವರು, ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ), ಡಾ. ಆರ್. ಎಚ್ ಫತೇಪುರ್, ಕಾಲೇಜು ಅಭಿವೃದ್ಧಿ ಮಂಡಳಿ, ರಾಯಚೂರು ವಿಶ್ವವಿದ್ಯಾಲಯ ರಾಯಚೂರು, ಡಾ. ಜಿ. ಎಸ್ ಬಿರಾದರ್, ಉಪಕುಲಸಚಿವರು, ಪ್ರೊ. ಯಂಕಣ್ಣ ಪ್ರಾಚಾರ್ಯರು, ಸ.ಪ್ರ.ದ ಕಾಲೇಜು,ರಾಯಚೂರು ಇವರು ಉಪಸ್ಥಿತರಿದ್ದರು.



