NEW

೨೦೨೫-೨೬ ನೇ ಸಾಲಿನ ಸ್ನಾತಕ (UG) ದ್ವಿತೀಯ, ನಾಲ್ಕನೇಯ ಮತ್ತು ಆರನೇಯ ಸೆಮಿಸ್ಟರ್ ನ ರೆಗ್ಯುಲರ್/ ರಿಪೀಟರ್ಸ್ (NEP/SEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು ೨೦೨೪-೨೫ ನೇ ಸಾಲಿನ ಸ್ನಾತಕ (UG)(SEP/NEP) ದ್ವಿತೀಯ ಮತ್ತು ನಾಲ್ಕನೇಯ ಸೆಮಿಸ್ಟರ್ ನ ಬಿಎ/ಬಿಎಸ್ಸಿ / ಬಿಕಾಂ/ಬಿಸಿಎ /ಬಿಬಿಎ /ಬಿಎಸ್ ಡೆಬ್ಲ್ಯೂ ಕೋರ್ಸ್ ಗಳ ಮರುಮೌಲ್ಯಮಾಪನ ಅಧಿಸೂಚನೆ 2025-26 ನೇ ಸಾಲಿನ ಸ್ನಾತಕ(UG) ಪ್ರಥಮ, ತೃತೀಯ ಹಾಗೂ ಐದನೇಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ಸಂಭಾವನೆಯನ್ನು ಪಾವತಿಸಲು ಅವರ ಬ್ಯಾಂಕ್ ಖಾತೆಯ ವಿವರವನ್ನು ಒದಗಿಸುವ ಕುರಿತು. 2025-26ನೇ ಸಾಲಿನ ಸ್ನಾತಕೋತ್ತರ(PG) ದ್ವಿತೀಯ ಸೆಮಿಸ್ಟರ್ ನ OPEN ELECTIVE(OE) ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು. 2025-26ನೇ ಸಾಲಿನ ಬಿ.ಇಡಿ. ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸರ್ಕಾರಿ ಕೋಟಾದಡಿ ದಾಖಲಾಗದೆ ಉಳಿಕೆಯಾಗಿರುವ ಸೀಟುಗಳ ಮಾಹಿತಿ ಕುರಿತು. ೨೦೨೪-೨೫ ನೇ ಸಾಲಿನ ಸ್ನಾತಕೋತ್ತರ(PG) ನಾಲ್ಕನೇ ಸೆಮಿಸ್ಟರ್ ನ(CBCS/NEWCBCS) ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ ಕುರಿತು. Registration of II Semester Open Elective Subject 2026

ಎನ್.ಎಸ್.ಎಸ್ ಸ್ವಯಂಸೇವಕರು ಈ ದೇಶದ ರಾಯಭಾರಿಗಳು : ಡಾ. ಪ್ರತಾಪ್ ಲಿಂಗಯ್ಯ

ಎನ್.ಎಸ್.ಎಸ್ ರಾಷ್ಟೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭ

ರಾಯಚೂರು, ಮಾ.04- ಭಾರತ ದೇಶವು ವೈವಿಧ್ಯತೆಯಿಂದ ಕೂಡಿರುವುದರಿಂದ ಈ ಒಂದು ಎನ್‌ಎಸ್‌ಎಸ್ ಶಿಬಿರದಲ್ಲಿ ನಾವು ಭಾಷೆ, ಆಹಾರ, ಸಂಪ್ರದಾಯ, ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಅದಕ್ಕೆ ಕಾರಣ ನಮ್ಮಲ್ಲಿರುವ ಏಕತೆಯ ಭಾವನೆ. ಸಾಮಾಜಿಕ ಜವಾಬ್ದಾರಿಯುತ ನಾಗರಿಕರಾಗಲು ಎನ್‌ಎಸ್‌ಎಸ್ ವಿಶೇಷ ಶಿಬಿರಗಳ ವಿದ್ಯಾರ್ಥಿಗಳಲ್ಲಿ ಶ್ರಮದಾನ ಮತ್ತು ನಾಯಕತ್ವದ ಗುಣಗಳನ್ನು ಪ್ರೋತ್ಸಾಹಿಸುತ್ತವೆ. ಎನ್‌ಎಸ್‌ಎಸ್ ಸ್ವಯಂಸೇವಕರೇ ಈ ದೇಶದ ರಾಯಭಾರಿಗಳು ಎಂದು ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ರಾಜ್ಯ ಎನ್.ಎಸ್.ಎಸ್ ಕೋಶದ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟೀಯ ಸೇವಾ ಯೋಜನಾ ಕೋಶ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ಪ್ರಾದೇಶಿಕ ನಿರ್ದೇಶನಾಲಯ, ಎನ್‌ಎಸ್‌ಎಸ್ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಸಹಯೋಗದೊಂದಿಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ರಾಷ್ಟೀಯ ಸೇವಾ ಯೋಜನೆ ಅಡಿಯಲ್ಲಿ ವಿವಿಯ ಸಭಾಂಗಣದಲ್ಲಿ ಫೆ.೨೪ ರಿಂದ ಮಾ.೨ ರವರೆಗೆ ಹಮ್ಮಿಕೊಳ್ಳಲಾದ ೭ ದಿನಗಳ ರಾಷ್ಟೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ರಾಷ್ಟೀಯ ಭಾವೈಕ್ಯತಾ ಶಿಬಿರ ಹಾಗೂ ಯುವಜನೋತ್ಸವ ಮಾಡುವುದಕ್ಕೆ ಕರ್ನಾಟಕ ಸರ್ಕಾರವು ಅತಿ ಹೆಚ್ಚು ಪ್ರಾಮುಖ್ಯತೆ ಹಾಗೂ ಪ್ರೋತ್ಸಾಹ ನೀಡುತ್ತಿದೆ. ಪ್ರಾರಂಭದ ೧೯೬೯ರಲ್ಲಿ ರಾಷ್ಟೀಯ ಸೇವಾ ಯೋಜನೆಯಲ್ಲಿ ೪೦ ಸಾವಿರ ಸ್ವಯಂಸೇವಕರಿದ್ದರು, ಪ್ರಸ್ತುತ ೪೫ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಈ ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳು, ಚಟುವಟಿಕೆಗಳು, ಶಿಸ್ತುಬದ್ಧತೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಭಾರತ ಒಂದು ವೈವಿಧ್ಯತೆಯಿಂದ ಕೂಡಿರುವುದೇ ಇದಕ್ಕೆ ಕಾರಣವಾಗಿದೆ. ಭಾರತೀಯ ಸಂವಿಧಾನವು ೨೨ ಭಾಷೆಗಳನ್ನು ಗುರುತಿಸಿದರು ಅದರಲ್ಲಿ ಹಲವಾರು ಉಪಭಾಷೆಗಳಿದ್ದರೂ ನಮ್ಮಲ್ಲಿ ಏಕತೆಯಿದೆ. ಸಮಾಜದಲ್ಲಿ ಜಾತಿಯತೆ, ಕೋಮುವಾದಗಳು ಇವೆಲ್ಲವನ್ನು ಹೋಗಲಾಡಿಸಲು ನಾವು ಈ ಒಂದು ಶಿಬಿರದಲ್ಲಿ ೧೫೦ ಜವಾಬ್ದಾರಿಯುತ ಸ್ವಯಂಸೇವಕರನ್ನು ಆಯ್ಕೆಮಾಡಿದ್ದೇವೆ. ಈ ಸಂದರ್ಭದಲ್ಲಿ ಏಳು ದಿನಗಳ ಎನ್.ಎಸ್.ಎಸ್ ಶಿಬಿರವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎ.ಚನ್ನಪ್ಪ ಕೆ.ಎ.ಎಸ್ ಮಾತನಾಡಿ, ಶಿಬಿರಾರ್ಥಿಗಳು ಏಳು ದಿನಗಳವರೆಗೆ ವಿಶ್ವವಿದ್ಯಾಲಯದ ಆಟದ ಮೈದಾನ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಎನ್‌ಎಸ್‌ಎಸ್ ಸ್ವಯಂಸೇವಕರು ದೇಶದ ಅಭಿವೃದ್ಧಿಯಲ್ಲಿ ಪಾತ್ರವಹಿಸಲು ಮತ್ತು ಸಮಾಜದ ಸೇವೆಗೆ ಸದಾ ಸಿದ್ಧರಾಗಿರಲು ಈ ಶಿಬಿರಗಳು ಪ್ರೇರಣೆಯಾಗುತ್ತವೆ. ಅಷ್ಟೇ ಅಲ್ಲದೆ ಯುವಜನತೆ ಜವಾಬ್ದಾರಿಯುತ ಜೀವನ ಮಾಡುತ್ತಾರೆ. ನಮ್ಮ ದೇಶ ಸಾಂಸ್ಕೃತಿಕವಾಗಿ ಭೌಗೋಳಿಕವಾಗಿ ಆರ್ಥಿಕವಾಗಿ ಬೇರೆ ಬೇರೆಯಾಗಿದ್ದರೂ ಕೂಡ ಈ ಭೂಮಿಯ ಮೇಲೆ ಏಕತೆಯಿಂದ ಜೀವನ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಿಂದ ಶಿಬಿರಾರ್ಥಿಗಳು ಭಾಗವಹಿಸಿ ಪ್ರತಿದಿನ ಉಪನ್ಯಾಸದ ಮಾಹಿತಿ ತಾವು ಪಡೆದಿದ್ದು ಉಪಯುಕ್ತವಾಗಿದೆ. ಎನ್‌ಎಸ್‌ಎಸ್ ಸ್ವಯಂಸೇವಕರು, ಸಂಯೋಜಕರು, ಶಿಬಿರಾರ್ಥಿಗಳಿಂದ ಈ ಏಳು ದಿನಗಳ ಶಿಬಿರ ಯಶಸ್ವಿಗೊಳಿಸಿದ್ದು, ಶಿಬಿರಾರ್ಥಿಗಳು ರಾಯಭಾರಿಗಳಾಗಿ ಕೆಲಸಮಾಡಿ ಎಂದು ಆಶಿಸಿದರು.
ಬೆಂಗಳೂರಿನ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯದ ಯುವ ಅಧಿಕಾರಿ ಪಿ.ಎನ್.ಸಂತೋಷ ಮಾತನಾಡಿ, ಆಯೋಜಕ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸ್ವಯಂಸೇವಕರ ಬೋಧಕ-ಬೋಧಕೇತರ ಸಿಬ್ಬಂದಿಗಳಲ್ಲಿ ಆಯೋಜನೆಗಾಗಿ ಅಂಭಿನAದಿಸಿ ಮಾತನಾಡುತ್ತ ಎನ್‌ಎಸ್‌ಎಸ್ ಶಿಬಿರಾರ್ಥಿಗಳಲ್ಲೆರೂ ವಿವಿಧ ಪ್ರದೇಶ ಹಾಗೂ ವಿದ್ಯಾ ಸಂಸ್ಥೆಗಳ ರಾಯಬಾರಿಯಾಗಿ ಇಲ್ಲಿ ಭಾಗವಹಿಸಿದ್ದೀರಿ, ಹಾಗೆ ನೀವು ಮರಳಿ ನಿಮ್ಮ ಮೂಲ ಸ್ಥಳಕ್ಕೆ ಹೋದಾಗ ನೀವು ರಾಷ್ಟೀಯ ಏಕತೆ ಹಾಗೂ ಸಮಗ್ರತೆಯ ರಾಯಭಾರಿಗಳಾಗಿ ಪ್ರತಿನಿಧಿಸುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಮನನ ಮಾಡಿದರು. ಕರ್ನಾಟಕ ಸರ್ಕಾರ ದೇಶದಲ್ಲಿಯೆ ಅತಿ ಹೆಚ್ಚು ೧೦ ರಾಷ್ಟಿçÃಯ ಭಾವೈಕ್ಯತಾ ಶಿಬಿರವನ್ನು ಆಯೋಜಿಸುವ ಮೂಲಕ ಪ್ರಶಂಸನೀಯವಾಗಿದೆ. ಹಾಗೇ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹಾಗೂ ಆರ್ಥಿಕವಾಗಿ ನಾಲ್ಕನೆಯ ಸ್ಥಾನದಲ್ಲಿದೆ. ಈ ದೇಶದ ಸಮಗ್ರತೆ ಹಾಗೂ ಏಕತೆಗೆ ಭಂಗ ತರುವಂತಹ ಸಂಘಟಗಳಿಗೆ ಎನ್‌ಎಸ್‌ಎಸ್ ಸ್ವಯಂ ಸೇವಕರು, ವಿದ್ಯಾರ್ಥಿಗಳು ಬಲಿಯಾಗದೆ. “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಘೋಷಣೆಯಂತೆ ರಾಷ್ಟçದ ಏಕತೆ, ಅಭಿವೃದ್ಧಿಗೆ ತಮ್ಮ ಆಲೋಚನೆ ಹಾಗೂ ಕ್ರೀಯೆಗಳ ಮೂಲಕ ಭಾಗವಹಿಸಿ ಇಡೀ ದೇಶವನ್ನು ಒಂದೆ ದೃಷ್ಟಿಯಡಿ ಕಾಣಬೇಕು ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಡೀನ್ ಮತ್ತು ಐಕ್ಯೂಎಸಿ ನಿರ್ದೇಶಕರು ಪ್ರೊ.ಪಿ.ಭಾಸ್ಕರ್, ಬೆಂಗಳೂರಿನ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶಕರಾದ ಗಿರ್ಧರ್ ಉಪಾಧ್ಯಾಯ, ನಿವೃತ್ತ ಪ್ರಾಚಾರ್ಯರು ಹಾಗೂ ಎನ್‌ಎಸ್‌ಎಸ್ ರಾಜ್ಯ ಪುರಸ್ಕೃತರಾದ ಡಾ.ಶ್ರೀನಿವಾಸ ರಾಯಚೂರುಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕರ್ನಾಟಕದ ೧೬ ವಿಶ್ವವಿದ್ಯಾಲಯಗಳು ಮತ್ತು ಇತರೆ ಐದು ರಾಜ್ಯಗಳಾದ ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳನಾಡಿನ ವಿಶ್ವವಿದ್ಯಾಲಯಗಳ ಸ್ವಯಂಸೇವಕರು ಈ ಏಳು ದಿನದ ಶಿಬಿರದಲ್ಲಿ ಭಾಗವಹಿಸಿದ್ದರು. ಎನ್.ಎಸ್.ಎಸ್ ಸಹಾಯಕ ನಿರ್ದೇಶಕರು ಹಾಗೂ ಅತಿಥಿ ಉಪನ್ಯಾಸಕರಾದ ಇತಿಹಾಸ ವಿಭಾಗದ ಡಾ.ಪದ್ಮಜಾ ದೇಸಾಯಿ, ಅರ್ಥಶಾಸ್ತç ವಿಭಾಗದ ಶಿವರಾಜ್ ಹರವಿ, ವಾಲ್ಮೀಕಿ ವಿವಿಯ ವಿವಿಧ ವಿಭಾಗಗಳ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎನ್.ಎಸ್.ಎಸ್ ಶಿಬಿರದ ಅಂತಿಮ ದಿನದಂದು ಅತಿಥಿಗಳ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಅನುಭವ ಹಂಚಿಕೆ ಮತ್ತು ಗೌರವ ಸಮರ್ಪಣೆ ನಡೆಯಿತು. ಪ್ರತಿದಿನ ಸಂಜೆ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವು ಹಮ್ಮಿಕೊಳ್ಳಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟೀಯ ಭಾವೈಕ್ಯತಾ ಶಿಬಿರದ ಒಂದು ವಾರದ ವರದಿಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ್ ಅವರು ಒಂದು ವಾರದ ಎನ್‌ಎಸ್‌ಎಸ್ ಶಿಬಿರದ ವರದಿ ವಾಚನವನ್ನು ಮಾಡಿದರು, ಕೇರಳದ ಶಿಬಿರಾರ್ಥಿ ಮೂರ್ಶಿದ ಪ್ರಾರ್ಥಿಸಿದರು, ವಾಲ್ಮೀಕಿ ವಿವಿಯ ಕಲಾ ವಿಭಾಗದ ಡೀನರಾದ ಡಾ.ಲತಾ.ಎಂ.ಎಸ್. ಸ್ವಾಗತಿಸಿದರು, ಎನ್.ಎಸ್.ಎಸ್ ಸಹಾಯಕ ನಿರ್ದೇಶಕರು ಹಾಗೂ ಅತಿಥಿ ಉಪನ್ಯಾಸಕರಾದ ಇಂಗ್ಲಿಷ್ ವಿಭಾಗದ ಅನಿಲ್ ಅಪ್ರಾಳ್ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು, ಸಮಾಜಕಾರ್ಯ ವಿಭಾಗದ ಬಜಾರಪ್ಪ ನಿರೂಪಿಸಿದರು, ರಾಜ್ಯಶಾಸ್ತç ವಿಭಾಗದ ನಾಗವೇಣಿ.ಡಿ ವಂದಿಸಿದರು.

೨೦೨೫-೨೬ ನೇ ಸಾಲಿನ ಸ್ನಾತಕ (UG) ದ್ವಿತೀಯ, ನಾಲ್ಕನೇಯ ಮತ್ತು ಆರನೇಯ ಸೆಮಿಸ್ಟರ್ ನ ರೆಗ್ಯುಲರ್/ ರಿಪೀಟರ್ಸ್ (NEP/SEP) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ಕುರಿತು