NEW

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪದವಿಯ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್‌ನ ಶೈಕ್ಷಣಿಕ ವೇಳಾಪಟ್ಟಿ ವಿವರ ಕುರಿತು. List of External Examiners for UG I, III & V Semester Examination November-2026. Revised UG I, III and V Semester (SEP/NEP) Examination Nodal Centre Notification 2026-27. Revised UG I, III and V Semester (SEP/NEP) Examination Centre Notification 2026-27. 2026-27ನೇ ಸಾಲಿನ ಸ್ನಾತಕ (ಬಿ.ಎ./ಬಿ.ಕಾಂ./ಬಿ.ಎಸ್ಸಿ./ಬಿ.ಬಿ.ಎ./ಬಿ.ಸಿ.ಎ./ಬಿ.ಎಸ್.ಡಬ್ಲ್ಯೂ) ಪ್ರಥಮ, ತೃತೀಯ, ಹಾಗೂ ಐದನೇ ಸೆಮಿಸ್ಟರ್ ದಿನಾಂಕ 02.11.2026 ರಿಂದ 11.11.2026 ರವರೆಗೆ ಹಾಗೂ 01.12.2026 ರ ಮುಂದೂಡಿದ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿಪಡಿಸಿ ಪ್ರಕಟಿಸುವ ಕುರಿತು. ವಾಣಿಜ್ಯ ವಿಷಯದ ಪ್ರಥಮ ಸೆಮಿಸ್ಟರ್‌ನಿಂದ ನಾಲ್ಕನೇ ಸೆಮಿಸ್ಟರ್‌ನ ಪಠ್ಯಕ್ರಮಕ್ಕೆ ಹೊಸ ಪ್ರಶ್ನೆಪತ್ರಿಕೆ ಮಾದರಿಯನ್ನು ರಚಿಸಿರುವ ಕುರಿತು. 2022-23ನೇ ಸಾಲಿನ ಸ್ನಾತಕ(B.A) ಬಿ.ಎ ಪದವಿಯ 5 ಮತ್ತು 6ನೇ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು ವಿತರಿಸುವ ಕುರಿತು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ನೂತನ ಕುಲಸಚಿವರು (ಮೌಲ್ಯಮಾಪನ) ಪ್ರೊ. ವಿರುಪಾಕ್ಷಯ್ಯ. ಡಿ.ಬಿ.ಎಂ., ಇವರು ಅಧಿಕಾರ ಸ್ವೀಕಾರ.

ಹೊಸ ಶಿಕ್ಷಣ ನೀತಿಯಂತೆ ತ್ವರಿತ ಹಾಗೂ ಗುಣಮಟ್ಟದ ಪರೀಕ್ಷಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲು ಶ್ರಮಿಸುವುದಾಗಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಸಚಿವ (ಮೌಲ್ಯಮಾಪನ) ಪ್ರೊ. ವಿರುಪಾಕ್ಷಯ್ಯ. ಡಿ.ಬಿ.ಎಂ. ಅವರು ಹೇಳಿದರು.

ಹೊಸ ಶಿಕ್ಷಣ ನೀತಿಯಂತೆ ತ್ವರಿತ ಹಾಗೂ ಗುಣಮಟ್ಟದ ಪರೀಕ್ಷಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲು ಶ್ರಮಿಸುವುದಾಗಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಸಚಿವ (ಮೌಲ್ಯಮಾಪನ) ಪ್ರೊ. ವಿರುಪಾಕ್ಷಯ್ಯ. ಡಿ.ಬಿ.ಎಂ. ಅವರು ಹೇಳಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಪರೀಕ್ಷಾಂಗ ಕಚೇರಿಯಲ್ಲಿ ಬುಧವಾರ ಕಡತಕ್ಕೆ ಸಹಿ ಹಾಕುವ ಮೂಲಕ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಮೌಲ್ಯಮಾಪನ ವಿಭಾಗದ ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಿ, ಎರಡು ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಯ ಎಲ್ಲಾ ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸುವುದರೊಂದಿಗೆ ವಿಶ್ವವಿದ್ಯಾಲಯದ ಏಳಿಗೆಗೆ ಸಕಲ ರೀತಿಯ ಪ್ರೋತ್ಸಾಹ ನೀಡಲಾಗುವುದು. ಹೊಸ ಶಿಕ್ಷಣ ನೀತಿಯಂತೆ ಪ್ರವೇಶ, ಆಡಳಿತ, ಪರೀಕ್ಷಾ ವಿಭಾಗದಲ್ಲಿ ಸಮಗ್ರ ಸುಧಾರಣೆ ತರಲು ಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ನೂತನ ಕುಲಸಚಿವರು (ಮೌಲ್ಯಮಾಪನ) ಅವರನ್ನು ಸ್ವಾಗತಿಸಿ, ಅಭಿನಂದಿಸಿದರು.

ಕುಲಸಚಿವರಾದ ಡಾ. ಎ. ಚನ್ನಪ್ಪ, ಹಣಕಾಸು ಅಧಿಕಾರಿ ಡಾ. ಸುಯಮೀಂದ್ರ ಕುಲಕರ್ಣಿ, ಉಪಕುಲಸಚಿವ ಡಾ. ಕೆ. ವೆಂಕಟೇಶ್, ಶಿಕ್ಷಣ ನಿಕಾಯದ ಡೀನ್ ಪ್ರೊ. ಪಾರ್ವತಿ ಸಿ.ಎಸ್., ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಿ. ಭಾಸ್ಕರ್, ಕಲಾ ನಿಕಾಯದ ಡಾ. ಲತಾ, ಗ್ರಂಥಪಾಲಕ ಡಾ. ಜಿ.ಎಸ್. ಬಿರಾದಾರ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ನೂತನ ಕುಲಸಚಿವ (ಮೌಲ್ಯಮಾಪನ) ಅವರನ್ನು ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದರು.