
ದಿನಾಂಕ ೨೫.೦೯.೨೦೨೫ ರಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ಪುರುಷರ ಕಬಡ್ಡಿ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆ ೨೦೨೫-೨೬ ಉದ್ಘಾಟನಾ ಕಾರ್ಯಕ್ರಮವನ್ನು ಮೌಲ್ಯಮಾಪನ ಕುಲಸಚಿವರಾದ ಪ್ರೊ.ಜ್ಯೋತಿ ದಮ್ಮ ಪ್ರಕಾಶ್ ನೆರವೇರಿಸಿದರು. ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್. ಇವರು ಅಂತಿಮ ಕಬಡ್ಡಿ ಸ್ಪರ್ಧೆ ವೀಕ್ಷಣೆಗೆ ಸಾಕ್ಷಿಯಾಗುವುದಲ್ಲದೆ ಸಮಾರೋಪ ವೇದಿಕೆಯಲ್ಲಿ ವಿಜೇತರಾದ ಲಿಂಗಸೂಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ, ರಾಯಚೂರಿನ ವಿ.ಆರ್.ಇ.ಟಿ. ಕಾಲೇಜಿಗೆ ದ್ವಿತೀಯ ಬಹುಮಾನ ವಿತರಿಸಿ ಮುಂದಿನ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ನಮ್ಮ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಭಾಗವಹಿಸುವವರಿಗೆ ಶುಭ ಹಾರೈಸಿದರು.
