NEW

2025-26 ನೇ ಸಾಲಿನ ಸ್ನಾತಕ(UG) ಆರನೇ(NEP) ಸೆಮಿಸ್ಟರ್ ನ (BSC/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕುರಿತು. 2025-26 ನೇ ಸಾಲಿನ ಸ್ನಾತಕ(UG) ಪ್ರಥಮ(NEP) ಸೆಮಿಸ್ಟರ್ ನ (BA/BSC/BCOM/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕುರಿತು. 2024-25 ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಸ್ನಾತಕೋತ್ತರ(PG) MA/MSC/MCOM/MLISC/MJMC/ ಕೋರ್ಸಗಳಲ್ಲಿ ಮೊದಲ ಹತ್ತು ಶ್ರೇಣಿಗಳಲ್ಲಿ(RANK) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿರುವ ಕುರಿತು. 2024-25 ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಸ್ನಾತಕ(UG) BA/BSC/BCOM/BBA/BCA ಕೋರ್ಸಗಳಲ್ಲಿ ಮೊದಲ ಹತ್ತು ಶ್ರೇಣಿಗಳಲ್ಲಿ(RANK) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿರುವ ಕುರಿತು. 2026-27 ನೇ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ(MA/MSC/MCOM/MSW/MLISC/MJMC) ಪದವಿಗಳ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸುವ ಕುರಿತು. 2026-27ನೇ ಸಾಲಿನ ಸ್ನಾತಕ(UG) ಪದವಿಯ ಪ್ರಥಮ ಸೆಮಿಸ್ಟರ್ ನ ಪ್ರವೇಶಾತಿ ದಿನಾಂಕವನ್ನು ಮುಂದೂಡಿರುವ ಕುರಿತು. 2021-22 ರಿಂದ 2025-26 ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪದವಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರವೇಶಾತಿ ಶುಲ್ಕವನ್ನು ಮಹಾವಿದ್ಯಾಲಗಳು ಬಾಕಿ ಉಳಿಸಿಕೊಂಡಿರುವ ಕುರಿತು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ : 7 ದಿನಗಳ ರಾಷ್ಟೀಯ ಸೇವಾ ಯೋಜನೆ ರಾಷ್ಟೀಯ ಭಾವೈಕ್ಯತಾ ಶಿಬಿರ – 2026

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತರಾಗಿ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ರಾಷ್ಟೀಯ ಸೇವಾ ಯೋಜನೆ ಪೂರಕ ವೇದಿಕೆ ಎಂದು ಆದಿಕವಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅಭಿಪ್ರಾಯಪಟ್ಟರು.
ರಾಷ್ಟೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ಪ್ರಾದೇಶಿಕ ನಿರ್ದೇಶನಾಲಯ, ಏನ್.ಎಸ.ಎಸ. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಸಹಯೋಗದೊಂದಿಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ರಾಷ್ಟೀಯ ಸೇವಾ ಯೋಜನೆ ಅಡಿಯಲ್ಲಿ ವಿವಿಯ ಸಭಾಂಗಣದಲ್ಲಿ ದಿನಾಂಕ. 24 ರಂದು ನಡೆದ 7 ದಿನಗಳ ರಾಷ್ಟೀಯ ಭಾವೈಕ್ಯತಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಡಾ. ಎ.ಚನ್ನಪ್ಪ ಅವರು ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ನಡೆಯುವ ರಾಷ್ಟೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ರಾಷ್ಟ್ರಿಯ ಸೇವಾ ಯೋಜನೆಯ ಉದ್ದೇಶಗಳನ್ನು ಜೀವನದ ಉದ್ದಕ್ಕೂ ಪಾಲಿಸಬೇಕು. ಶಿಬಿರದಲ್ಲಿ ಕಲಿತುಕೊಂಡ ವಿಚಾರಗಳನ್ನು, ಸಂಸ್ಕಾರ ಹೆಚ್ಚಿಸುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಏಳು ದಿನಗಳ ಈ ಶಿಬಿರ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಆತ್ಮ ಸ್ಥೈರ್ಯ ಹಾಗೂ ಉತ್ತಮ ಪ್ರಜೆಗಳಾಗಿ ಬದುಕಲು ಕಲಿಸಿಕೊಡುತ್ತದೆ ಎಂದರು. ಈ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರು ಡಾ.ಸುಯಮಿಂದ್ರ ಕುಲಕರ್ಣಿ, ಉಪಕುಲಪತಿಗಳು ಡಾ.ಕೆ.ವೆಂಕಟೇಶ್, ಡೀನರಾದ ಪ್ರೊ. ಪಾರ್ವತಿ ಸಿ.ಎಸ., ಡಾ.ಲತಾ.ಎಂ.ಎಸ., ಏನ್.ಎಸ.ಎಸ ಸಂಯೋಜನಾ ಅಧಿಕಾರಿ ಡಾ.ಜಿ.ಎಸ.ಬಿರಾದಾರ ಮತ್ತು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದ್ಯಸರಾದ ಡಾ.ಮೀನಾಕ್ಷಿ ಖಂಡಿಮಠ, ಡಿ.ಆರ್.ಚಿನ್ನ, ಜೀಶಾನ್ ಅಖಿಲ ಸಿದ್ದಿಖಿ, ಶಿವಣ್ಣ, ಶ್ರೇಯಾಂಕ್ ಎಚ್.ವಿ ರವರು ಪಾಲ್ಗೊಂಡಿದ್ದರು.