Press releases

View by type

View by releasing authority

ಕಟ್ಟಡದ ನಿರ್ಮಾಣ ಕಾಮಗಾರಿ ಪರಿಶೀಲನೆ

ಪ್ರೊ. ಹರೀಶ್ ರಾಮಸ್ವಾಮಿ ಗೌರವಾನ್ವಿತ ಕುಲಪತಿಗಳು ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಇವರು ರಾಯಚೂರು ವಿಶ್ವವಿದ್ಯಾಲಯ ಮುಖ್ಯ ಆವರಣದಲ್ಲಿ ನಡೆದಿರುವ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪರಿಶೀಲಿಸಿದರು.

ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಆರಂಭ

ವಿಶ್ವವಿದ್ಯಾಲಯದ ೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಪ್ರಕ್ರಿಯೆವು ದಿನಾಂಕ ೦೩.೦೧.೨೦೨೪ ರಿಂದ ಪ್ರಾರಂಭಗೊಳ್ಳಲಿದೆ ಎಂದು ಪ್ರೊ. ವಿಶ್ವನಾಥ್ ಎಂ. ಕುಲಸಚಿವರು, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಅವರು ಘೋಷಿಸಿದರು.

ಅಥ್ಲೆಟಿಕ್ ಕ್ರೀಡಾಕೂಟ 2023-24

ಮೊಟ್ಟಮೊದಲ ಬಾರಿಗೆ ರಾಯಚೂರು ವಿಶ್ವವಿದ್ಯಾನಿಲಯದ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ೨೦೨೩-೨೪ ಆಯೋಜನೆ ಮಾಡಿದಕ್ಕಾಗಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಉದ್ಯೋಗ ಕೌಶಲ್ಯಗಳ ದೃಷ್ಟಿಕೋನ ಕಾರ್ಯಕ್ರಮ

ರಾಯಚೂರು ವಿಶ್ವವಿದ್ಯಾನಿಲಯದ ಕಾಲೇಜು ಉಪನ್ಯಾಸಕರಿಗೆ 07.12.2023 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿನಲ್ಲಿ ಉದ್ಯೋಗ ಕೌಶಲ್ಯಗಳ ದೃಷ್ಟಿಕೋನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು
ಮಾನ್ಯ ಕುಲಪತಿಗಳು ಪ್ರೊ.ಹರೀಶ್ ರಾಮಸ್ವಾಮಿ ಅವರು ಉದ್ಘಾಟಿಸಿದರು.

ಪ್ರಾಚಾರ್ಯರ ಸಭೆ

ವಿಶ್ವವಿದ್ಯಾಲಯದ ಆಡಳಿತಾತ್ಮಕ ಹಾಗು ಶೈಕ್ಷಣಿಕ ವಿಚಾರಗಳನ್ನು ಚರ್ಚಿಸಲು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರಿನಲ್ಲಿ ಆಯೋಜಿಸಿದ ಪ್ರಾಚಾರ್ಯರ ಸಭೆಯನ್ನು ಮಾನ್ಯ ಕುಲಪತಿಗಳು ಪ್ರೊ. ಹರೀಶ್ ರಾಮಸ್ವಾಮಿ ಇವರು ಉದ್ಘಾಟಿಸಿದರು.

ವಿಶ್ವಚೇತನ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತೋತ್ಸವ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಹರೀಶ್ ರಾಮಸ್ವಾಮಿ, ಪ್ರೊ. ಯರಿಸ್ವಾಮಿ ಎಂ. ಕುಲಸಚಿವರು(ಮೌಲ್ಯಮಾಪನ), ಪ್ರೊ. ಪಿ ಭಾಸ್ಕರ್ ನೋಡಲ್ ಅಧಿಕಾರಿಗಳು, ಡಾ. ಜಿ ಎಸ್ ಬಿರಾದರ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಸ್ನಾತಕೋತ್ತರ ಪರೀಕ್ಷೆಗಳು

ಸ್ನಾತಕೋತ್ತರ II ಹಾಗೂ IVನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಮತ್ತು ಸಮಯೋಚಿತವಾಗಿ ನಡೆಸಲು ಎಲ್ಲಾ ಕಾಲೇಜುಗಳಿಗೆ ಪ್ರೊ.ಯರಿಸ್ವಾಮಿ ಎಂ. ಕುಲಸಚಿವರು (ಮೌಲ್ಯಮಾಪನ ) ಆದೇಶಿಸಿರುತ್ತಾರೆ. ಮುಖ್ಯ ಆವರಣದ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೊಠಡಿಗೆ ಭೇಟಿ ನೀಡಿದ ಸಮಯ.

ಫಲಿತಾಂಶಗಳು

ಸ್ನಾತಕೋತ್ತರ(PG) ಎಂ.ಎ ಪ್ರಥಮ ಸೆಮಿಸ್ಟರಿನ ಇಂಗ್ಲಿಷ್ ವಿಭಾಗದ ಫಲಿತಾಂಶ ಪ್ರಕಟ.