NEW

2025-26ನೇ ಸಾಲಿನ ಸ್ನಾತಕ(UG) ಆರನೇ(NEP) ಸೆಮಿಸ್ಟರ್ ನ (BA/BCOM) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು. 2026-27 ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) ಕೋರ್ಸಗಳ ಐದನೇ ಸೆಮಿಸ್ಟರ್ ಗೆ ಪರಿಷ್ಕೃತ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಕುರಿತು. 2026-27 ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ(MA/MSC/MCOM/MSW/MLISC/MJMC) ಪದವಿಗಳ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು. 2025-26 ನೇ ಸಾಲಿನ ಸ್ನಾತಕ(UG) (BA/BSC/BCOM/BBA/BCA/BSW) ಆರನೇ ಸೆಮಿಸ್ಟರ್ NEP ಡಿಜಿಟಲ್ ಮೌಲ್ಯಮಾಪನ ಸಂಭಾವನೆಯ ಬಿಲ್ಲುಗಳನ್ನು ಸಲ್ಲಿಸುವ ಕುರಿತು. M.S.W II & IV Semester Project Viva-Voce Examination Time-Table 2026 2025-26 ನೇ ಸಾಲಿನ ಸ್ನಾತಕ(UG) ಆರನೇ(NEP) ಸೆಮಿಸ್ಟರ್ ನ (BSC/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕುರಿತು. 2025-26 ನೇ ಸಾಲಿನ ಸ್ನಾತಕ(UG) ಪ್ರಥಮ(NEP) ಸೆಮಿಸ್ಟರ್ ನ (BA/BSC/BCOM/BBA/BCA) ಕೋರ್ಸ್ ಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕುರಿತು.

ಅಸಮಾನತೆಯಿಂದ ಬಳಲುತ್ತಿದ್ದ ಸಮಾಜವನ್ನು ನೋಡಿ ಸುಮ್ಮನಿರಲಾಗದೆ ಸಂಘರ್ಷ, ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡರು – ಡಾ.ಎಲ್.ಹನುಮಂತಯ್ಯ

ರಾಯಚೂರು 16.04.2026 : ಬಾಬಾ ಸಾಹೇಬ್ ಅಂಬೇಡ್ಕರ್ ಮನಸ್ಸು ಮಾಡಿದ್ದರೆ ದೊಡ್ಡ ಅಧಿಕಾರಿ, ಕುಲಪತಿಯಾಗಿ ಕಾರ್ಯನಿರ್ವಹಿಸಿ ಆರಾಮದಾಯಕ ಬದುಕು ನಡೆಸಬಹುದಾಗಿತ್ತು. ಆದರೆ ಅವರು ಆಯ್ಕೆ ಮಾಡಿಕೊಂಡದ್ದು ಸ್ವತಃ ಹೋರಾಟದ ದಾರಿಯಾಗಿತ್ತು. ಅಸಮಾನತೆಯಿಂದ ಬಳಲುತ್ತಿದ್ದ ಸಮಾಜವನ್ನು ನೋಡಿ ಸುಮ್ಮನಿರಲಾಗದೆ ಇಂಥದ್ದೊAದು ಸಂಘರ್ಷದ, ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡರು ಎಂದು ರಾಜ್ಯಸಭಾ ಮಾಜಿ ಸದಸ್ಯ, ಚಿಂತಕ ಡಾ. ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ಆದಿಕವಿ ಶ್ರೀ ಮಹಿರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಆಧುನಿಕ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ, ಸಾಮಾಜಿಕ ವಾತಾವರಣ ಸುಧಾರಿಸದೆ ಇನ್ನೂ ಅಸ್ಪೃಶ್ಯತೆ ಜೀವಂತ ಇದೆ ಎಂದು ಹೇಳಿದರು. ಅಂಬೇಡ್ಕರ್ ಮಂಡಿಸಿದ ಹಿಂದೂ ಕೋಡ್‌ಬಿಲ್ ದೇಶದ ಎಲ್ಲ ವರ್ಗದ ಮಹಿಳೆಯರಿಗೆ ಅನುಕೂಲವಾಯಿತು. ಈ ಬಿಲ್ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗಬೇಕೆಂದು ಪ್ರತಿಪಾದಿಸಿತು. ವಿಧವಾ ವಿವಾಹ ಪದ್ಧತಿ ಜಾರಿಗೊಳಿಸುವ ಮೊದಲ ಪ್ರಯತ್ನ ಮಾಡಿದ್ದು ಅಂಬೇಡ್ಕರ್. ಅವರು ತಳಸಮುದಾಯಗಳ ಮೀಸಲಾತಿಗಾಗಿಯಷ್ಟೇ ಹೋರಾಟ ಮಾಡಲಿಲ್ಲ, ದೇಶದ ಎಲ್ಲ ಜನರ ಒಳಿತಿಗಾಗಿ ಹೋರಾಡಿದರು ಎಂದರು.
ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಿಂದೂವಾಗಿ ಸಾಯಲಾರೆ ಎನ್ನುತ್ತಾರೆ. ದೇವರು ಮತ್ತು ಮನುಷ್ಯರ ನಡುವೆ ಸಂಬAಧವಿರುವ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ. ಬದಲಾಗಿ ಮುನುಷ್ಯ-ಮನುಷ್ಯರ ನಡುವೆ ಸಂಬAಧವೇರ್ಪಡುವ ಧರ್ಮದ ಬಗೆಗೆ ನಂಬಿಕೆ ಇದೆ. ಅಂಥ ಧರ್ಮವೆಂದರೆ ಬೌದ್ಧ ಧರ್ಮವೆಂದು ಪ್ರತಿಪಾದಿಸಿದ ಅಂಬೇಡ್ಕರ್ ಕೊನೆಗೆ ಲಕ್ಷಾಂತರ ಜನರೊಂದಿಗೆ ಬೌದ್ಧ ಧರ್ಮ ಸೇರ್ಪಡೆಯಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಅಂಬೇಡ್ಕರ್ ಅವರ ಆರ್ಥಿಕ ನೀತಿ, ಸಮಾಜವಾದಿ ದೃಷ್ಟಿಕೋನ ಬಹಳ ಮಹತ್ವದ್ದು. ಸಮಾಜದಲ್ಲಿನ ಆರ್ಥಿಕ ಅಸಮಾನತೆಗಳನ್ನು ನಿವಾರಿಸಿದಾಗ ಮಾತ್ರ ನೈಜ ಅಭಿವೃದ್ಧಿ ಸಾಧ್ಯ ಎಂಬುದನ್ನು ನಂಬಿದ್ದರು. ರಾಜಕೀಯ ಅಧಿಕಾರದ ಹಂಚಿಕೆಯಾಗಬೇಕು, ಜಾತಿ ಅಸಮಾನತೆ ತೊಲಗಬೇಕು, ತಳಸಮುದಾಯದ ಕಡುಬಡವರಿಗೆ ಭೂಮಿ ದೊರೆಯಬೇಕು ಎಂಬುದು ಅಂಬೇಡ್ಕರ್ ಕನಸಾಗಿತ್ತು. ಆ ಕನಸು ಈಡೇರಿಕೆಗಾಗಿ ಹಗಲಿರುಳು ಅವರು ಹೋರಾಡಿದರು ಎಂದು ಹೇಳಿದರು. ಕುಲಸಚಿವ ಡಾ.ಎ.ಚೆನ್ನಪ್ಪ ಮಾತನಾಡಿ, ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು. ಅದಕ್ಕಿಂತ ಶ್ರೇಷ್ಠವಾದ ಗ್ರಂಥ ಮತ್ತೊಂದಿಲ್ಲ. ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು. ವೇದಿಕೆಯ ಮೇಲೆ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಜಿ.ಎಸ್.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ‘ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರವರ ಚಿಂತನೆಗಳು ಮತ್ತು ಸಮಕಾಲೀನ ಭಾರತ’ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವೆಂಕಟೇಶ ಎನ್., ಶಿವರಾಜ, ಸಂಗೀತ ನಾಯಕ, ವೆಂಕಟೇಶ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪನ್ಯಾಸಕ ದುರುಗಪ್ಪ ಗಣೇಕಲ್ ಸ್ವಾಗತಿಸಿದರು. ಉಪನ್ಯಾಸಕಿ ಶಿವಲೀಲಾ ನಿರೂಪಿಸಿದರು. ಡಾ. ಪದ್ಮಜಾ ದೇಸಾಯಿ ವಂದಿಸಿದರು.