NEW

2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ(PG) ಪದವಿಯ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್‌ನ ಶೈಕ್ಷಣಿಕ ವೇಳಾಪಟ್ಟಿ ವಿವರ ಕುರಿತು. List of External Examiners for UG I, III & V Semester Examination November-2026. Revised UG I, III and V Semester (SEP/NEP) Examination Nodal Centre Notification 2026-27. Revised UG I, III and V Semester (SEP/NEP) Examination Centre Notification 2026-27. 2026-27ನೇ ಸಾಲಿನ ಸ್ನಾತಕ (ಬಿ.ಎ./ಬಿ.ಕಾಂ./ಬಿ.ಎಸ್ಸಿ./ಬಿ.ಬಿ.ಎ./ಬಿ.ಸಿ.ಎ./ಬಿ.ಎಸ್.ಡಬ್ಲ್ಯೂ) ಪ್ರಥಮ, ತೃತೀಯ, ಹಾಗೂ ಐದನೇ ಸೆಮಿಸ್ಟರ್ ದಿನಾಂಕ 02.11.2026 ರಿಂದ 11.11.2026 ರವರೆಗೆ ಹಾಗೂ 01.12.2026 ರ ಮುಂದೂಡಿದ ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಿಗದಿಪಡಿಸಿ ಪ್ರಕಟಿಸುವ ಕುರಿತು. ವಾಣಿಜ್ಯ ವಿಷಯದ ಪ್ರಥಮ ಸೆಮಿಸ್ಟರ್‌ನಿಂದ ನಾಲ್ಕನೇ ಸೆಮಿಸ್ಟರ್‌ನ ಪಠ್ಯಕ್ರಮಕ್ಕೆ ಹೊಸ ಪ್ರಶ್ನೆಪತ್ರಿಕೆ ಮಾದರಿಯನ್ನು ರಚಿಸಿರುವ ಕುರಿತು. 2022-23ನೇ ಸಾಲಿನ ಸ್ನಾತಕ(B.A) ಬಿ.ಎ ಪದವಿಯ 5 ಮತ್ತು 6ನೇ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು ವಿತರಿಸುವ ಕುರಿತು.

ವಾಲ್ಮೀಕಿ ವಿವಿಯಲ್ಲಿಅಂಬಿಗರ ಚೌಡಯ್ಯ ಜಯಂತಿ ಆಚರಣೆ: ಅಂಬಿಗರ ಚೌಡಯ್ಯರ ಕಾಯಕ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳೋಣ : ಪ್ರೊ.ಶಿವಾನಂದ ಕೆಳಗಿನಮನಿ

ದಿ. ೨೧ ಜನವರಿ ೨೦೨೬ : ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ಶರಣ ಪರಂಪರೆಯ ಅಂಬಿಗರ ಚೌಡಯ್ಯರ ಕಾಯಕತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಇಂತಹ ಮಹನೀಯರ ಜಯಂತಿ ಆಚರಣೆ ಶ್ಲಾಘನೀಯ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್., ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಗ್ರಂಥಪಾಲಕ ಡಾ.ಜಿ.ಎಸ್.ಬಿರಾದಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಕುಲಸಚಿವರಾದ ಡಾ.ಕೆ.ವೆಂಕಟೇಶ ಸ್ವಾಗತಿಸಿ ವಂದಿಸಿದರು.